ನಿಮ್ಮ ಮಾನಸಿಕ ಆರೋಗ್ಯ ಮತ್ತು ಸ್ವಾಸ್ಥ್ಯದ ಸಂಗಾತಿ
ಸಹಾಯವನ್ನು ಅರಸುವುದು ಮತ್ತು ಕೇಳುವುದರಲ್ಲಿ ತಪ್ಪಿಲ್ಲ.
ಪ್ರತಿವ್ಯಕ್ತೀಯೂ ಜೀವನದ ಒಂದಿಲ್ಲೊಂದು ಘಟ್ಟದಲ್ಲಿ ಕಷ್ಟದ ಸಂದರ್ಭಗಳನ್ನು ಎದುರಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಮಾನಸಿಕ ಸಮತೋಲನ ಕಾಯ್ದುಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ. ನಿಮ್ಮ ಜೀವನದ ಇಂತಹ ಸವಾಲಿನ ಸಂದರ್ಭಗಳಲ್ಲಿ ಆರೋಗ್ಯಕರ ಮನಸ್ಥಿತಿಯನ್ನು ಕಾಯ್ದುಕೊಳ್ಳಲು ಮನೋಸ್ಪಂದನ ನಿಮ್ಮ ಸಹಾಯಕ್ಕೆ ನಿಲ್ಲುತ್ತದೆ.
ನಾವು ಎಲ್ಲ ವಯೋಮಾನದವರಿಗೆ ವಯುಕ್ತಿಕ, ದಾಂಪತ್ಯಕ್ಕೆ ಸಂಬಂಧಿಸಿದ, ಪೋಷಕ ಮತ್ತು ಮಕ್ಕಳ ಹಾಗೂ ಕುಟುಂಬ ಸಂಬಂಧಿತ ಮನೋವೈಜ್ಞಾನಿಕ ಆಪ್ತಸಲಹೆಯನ್ನು ನೀಡುತ್ತೇವೆ. ಯಾವಾಗ ನಿಮ್ಮ ಯೋಚನೆಗಳು ಮತ್ತು ಭಾವನೆಗಳು ನಿಮ್ಮ ಹಿಡಿತ ಮೀರಿ ಹೋಗುತ್ತಿವೆ ಅನಿಸಿದಾಗ ಸಹಾಯವನ್ನು ಕೇಳುವುದು ಖಂಡಿತ ಸರಿಯಾದ ನಿರ್ಧಾರ.
ನಮ್ಮನ್ನು ಸಂಪರ್ಕಿಸಿ: ಆರೋಗ್ಯಕರ ಅಭ್ಯಾಸಗಳನ್ನು ಮತ್ತು ನಿಭಾಯಿಸುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು, ಜೀವನದ ಮುಖ್ಯ ಘಟ್ಟಗಳಾದ ಮದುವೆ, ಮಗುವಿನ ಜನನ, ಕೆಲಸದ ಬದಲಾವಣೆ ಇವುಗಳ ನಿರ್ವಹಣೆಯ ಹಂತದಲ್ಲಿ ಆಗಬಹುದಾದ ಭಾವನೆಗಳ ಏರಿಳಿತಗಳನ್ನು ಸಮರ್ಥವಾಗಿ ನಿಭಾಯಿಸಲು